ಪೋಸ್ಟ್‌ಗಳು
ಮೇ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
Featured post
ಮನೆ ಮದ್ದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸಾಮಾನ್ಯವಾಗಿ ಜನ್ಮ ಹೊಂದಿ ಒಂದು ವರ್ಷದೊಳಗಿನ ಮಗುವಿಗೆ ಕೆಮ್ಮು ನೆಗಡಿ ಉಂಟಾದರೆ ಮನೆಯಲ್ಲೇ ಯಾವ ರೀತಿಯ ಔಷಧಿಯನ್ನು ಬಳಸಿ ಎರಡರಿಂದ ಮೂರು ದಿನದಲ್ಲಿ ಸಂಪೂರ್ಣ ಗುಣಪಡಿಸಬಹುದು ಎಂಬುದು ಇಂದಿನ ಆಧುನಿಕ ಹೆಣ್ಣುಮಕ್ಕಳಿಗೆ ತಿಳಿಯದು ಆದರೆ ನಮ್ಮ ಹಿರಿಯರು ಅತ್ಯಂತ ಸರಳ ವಿಧಾನದಿಂದ ಮನೆಯಲ್ಲೇ ದೊರಕುವ ಗಿಡಮೂಲಿಕೆ ಹಾಗೂ ಮಸಾಲೆ ಪದಾರ್ಥಗಳಿಂದ ಇಂತಹ ಯಾವುದೇ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವಲ್ಲಿ ನಿಪುಣರಿದ್ದರು. ಹಾಗಾದರೆ ಇಂದು ನಾವು ಒಂದು ತಿಂಗಳ ಮಗುವಿಗೆ ಕೆಮ್ಮು ನೆಗಡಿ ಉಂಟಾದಾಗ ಮನೆ ಮದ್ದನ್ನು ಮಾಡಿ ಯಾವ ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನೋಡೋಣ ೧. ತುಳಸಿ ರಸ ದಿನಕ್ಕೆ ಅರ್ಧ ಚಮಚದಂತೆ ನಾಲ್ಕು ಬಾರಿ ನೀಡುವುದು, ಜೊತೆಯಲ್ಲಿ ಜೇನುತುಪ್ಪವನ್ನು ಬೆರೆಸಿ ನೀಡುವುದರಿಂದ ಬೇಗನೆ ಸುಧಾರಣೆ ಕಂಡು ಬರುತ್ತದೆ. ೨. ಅರಿಶಿಣ ಅರಿಶಿಣದ ಪುಡಿಯನ್ನು ಕಲಸಿ ಮಂದವಾಗಿ ತಲೆಯ ನೆತ್ತಿಯಲ್ಲಿ ತೆಳುವಾಗಿ ಲೇಪಿಸುವುದರಿಂದ ಶೀತ ನೆಗಡಿಗಳು ಬೇಗನೆ ವಾಸಿಯಾಗುವುದು ೩. ಗೋವಿನ ತುಪ್ಪ ದೇಶೀ ಹಸುವಿನ ಶುದ್ಧ ತುಪ್ಪವನ್ನು ಬಟ್ಟೆಯ ತಿರುಳಿನಲ್ಲಿ ಅದ್ದಿ ಮೂಗಿನೊಳಗೆ ಸವರುವುದರಿಂದ ಮಗುವಿನ ಕೆಮ್ಮು ಉಸಿರಾಟದ ತೊಂದರೆಗಳು ಸರಳವಾಗಿ ನಿವಾರಣೆ ಆಗುವುದು, ಅಲ್ಲದೆ ಅರಿಶಿಣದ ಪುಡಿಯನ್ನೂ ತುಪ್ಪದೊಂದಿಗೆ ಮೂಗಿನಲ್ಲಿ ಸವರುವುದರಿಂದ ತೊಂದರೆಗಳು ಬೇಗನೆ ಉಪಶಮನವಾಗುವುದು.